ನರೇಂದ್ರ ಮೋದಿ-ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಮುಂದಾದ ಸಿಬಿಐ
ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ. ಅಮಿತ್ ಶಾ ಕೇಂದ್ರ ಮಂತ್ರಿ. ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಆದರೆ ಈ ಇಬ್ಬರು ನಾಯಕರನ್ನೂ ಬಂಧಿಸುವ ಸಲುವಾಗಿ ಸಿಬಿಐ ಅಧಿಕಾರಿಗಳು ನಿರ್ಧರಿಸಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಗುಜರಾತ್ ನಿವೃತ್ತ ಡಿಐಜಿ ಡಿಜಿ ವಂಜಾರಾ ಇಂಥದ್ದೊಂದು ಆಘಾತಕಾರಿ ಸುದ್ದಿಯನ್ನು ಹೊರ ಹಾಕಿದ್ದು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ
ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಬೇಕಿದೆ. ದಯವಿಟ್ಟು ಇದಕ್ಕೆ ಅನುಮತಿಯನ್ನು ನೀಡಿ ಎಂದು ಸಿಬಿಐ ಅಧಿಕಾರಿಗಳು ಸಿಬಿಐನ ವಿಶೇಷ ಕೋರ್ಟ್ ಮುಂದೆ ಮನವಿಯನ್ನ ಸಲ್ಲಿಸಿದ್ದರು. ಈ ಸಂಬಂಧ ಸಿಬಿಐ ಕೋರ್ಟ್ ಪರಿಶೀಲನೆ ನಡೆಸಿ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ಮಾಡಿತ್ತು ಎಂದು ಗುಜರಾತ್ ನಿವೃತ್ತ ಡಿಐಜಿ ವಂಜಾರಾ ತಿಳಿಸಿದ್ದಾರೆ.
2004ರಲ್ಲಿ ನಡೆದ ಇಶ್ರತ್ ಜಹಾನ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಆರೋಪಿಗಳೆಂದು ಪರಿಗಣಿಸಲಾಗಿತ್ತು. ನಡೆದಿದ್ದು ನಕಲಿ ಎನ್ ಕೌಂಟರ್ ಎಂದು ಕೆಲವರು ಕೋರ್ಟಿನ ಮೆಟ್ಟಿಲೇರಿದ್ದರು. ಈ ಸಂಬಂಧ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ನರೇಂದ್ರ ಮೋದಿಯನ್ನು ರಹಸ್ಯವಾಗಿ ವಿಚಾರಣೆಯನ್ನೂ ನಡೆಸಿದ್ದರು ಎಂದು ತಿಳಿದು ಬಂದಿದೆ
ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ ದಿನದಿಂದದಿನಕ್ಕೆ ಬಿಗಡಾಯಿಸ್ತಾ ಹೋದಂತೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಅಂತ ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಎಷ್ಟು ಪ್ರಯತ್ನಿಸಿದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಅಮಿತ್ ಶಾಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ನೀಡಿತು ಎಂದು ಗುಜರಾತ್ ನಿವೃತ್ತ ಡಿಜಿಪಿ ವಂಜಾರಾ ತಿಳಿಸಿದ್ದಾರೆ.
ಇನ್ನು ಇಶ್ರತ್ ಜಹಾನ್ ಉಗ್ರಳಲ್ಲ. ಆಕೆ ಅಮಾಯಕಳು. 2004ರಲ್ಲಿ ನಡೆದ ಎನ್ ಕೌಂಟರ್ ನಕಲಿ ಎಂದು ಆರೋಪಿಸಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಹಲವರ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಮೋದಿ ಮತ್ತು ಅಮಿತ್ ಶಾ ಇಬ್ಬರ ಮೇಲೂ ಅನುಮಾನ ಪಟ್ಟಿದ್ದರು. ಆದರೆ ಅಮೆರಿಕ ಜೈಲಿನಲ್ಲಿರೋ ಉಗ್ರ ಡೇವಿಟ್ ಹೆಡ್ಲಿ 2016ರಲ್ಲಿ ಭಾರತದ ಕೋರ್ಟ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಿದ ಹೇಳಿಕೆಯಲ್ಲಿ, ಇಶ್ರತ್ ಜಹಾನ್ ಲಕ್ಷರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಮಾನವ ಬಾಂಬರ್ ಆಗಿದ್ದಳು. ಮತ್ತು ಮೋದಿಯ ಹತ್ಯೆಗೆ ಎಂದು ಇಶ್ರತ್ ಜಹಾನ್ ಮತ್ತು ಆಕೆಯ ತಂಡ ಸಿದ್ದವಾಗಿ ಓಡಾಡುತ್ತಿತ್ತು ಎಂದು ಹೇಳಿಕೆ ಕೊಟ್ಟಿದ್ದ. ಈ ಹೇಳಿಕೆಯ ನಂತರ ಮೋದಿ ವಿರುದ್ಧ ಎದ್ದಿದ್ದ ಆರೋಪಗಳು ತಣ್ಣಗಾಗಿದ್ದವು.
ಕಾಮೆಂಟ್ಗಳು
ಜೂನ್ 06, 2018ರಾಜಕೀಯ
📰RECENT POSTS
⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.
⚡ ಸಂಪಾದಕರ ಆಯ್ಕೆ: ಇಂದಿನ ಪ್ರಮುಖ ಸುದ್ದಿ, ವಿಶೇಷ ಕಥೆಗಳು ಮತ್ತು ವೀಡಿಯೋ ವರದಿ
📰 ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್, ಲೈವ್ ಅಪ್ಡೇಟ್ ಮತ್ತು ವೀಡಿಯೋ ವರದಿ
🕵️ ನಿಗೂಢ ರಹಸ್ಯಗಳು, ಅದ್ಭುತ ಸತ್ಯಗಳು, ಹೇಳದ ಕಥೆಗಳ ಸಂಪೂರ್ಣ ವಿಶ್ಲೇಷಣೆ
🏛️ ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ಮತ್ತು ಸಂಸತ್ ವಿಶ್ಲೇಷಣೆ
🗺️ ಕರ್ನಾಟಕದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ, ಆಡಳಿತ ಮತ್ತು ಅಭಿವೃದ್ಧಿ ವರದಿ
🌍 ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ನೀತಿ ನಿರ್ಧಾರಗಳು
🌐 ಜಗತ್ತಿನ ತಾಜಾ ಘಟನೆಗಳು, ಅಂತರರಾಷ್ಟ್ರೀಯ ಸುದ್ದಿ ಕನ್ನಡದಲ್ಲಿ ಸಂಪೂರ್ಣ ವಿವರ
🎬 ಸ್ಯಾಂಡಲ್ವುಡ್, ಹಾಲಿವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
🏆 ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲ ಕ್ರೀಡಾ ಸುದ್ದಿ ಮತ್ತು ತೆರೆಮರೆಯ ಕಥೆಗಳು
💼 ವ್ಯಾಪಾರ, ಷೇರು ಮಾರುಕಟ್ಟೆ, ಸ್ಟಾರ್ಟ್ಅಪ್ ಮತ್ತು ಯಶಸ್ಸಿನ ಕಥೆಗಳು
A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world
Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows.
A FOX TV.com - Brings Breaking news, Headlines of the days, top stories from India, United states, Russia and other contries
ಕಾಮೆಂಟ್ಗಳು