⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE

THE EDITOR'SCHOICE
A FOX TV - THE EDITOR'S CHOICE#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

JUST IN
#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

MOST VIEWED
#01

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#02

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

BREAKINGSTORIES
THE EDITOR'S CHOICE#01

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

LATEST#01'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡLATEST#02ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳುLATEST#03ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರLATEST#04ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆLATEST#05ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್LATEST#06ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತುLATEST#07ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತLATEST#08ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

ಬಿಜೆಪಿಯೇ ‘ಜೀವ’ ಅಂತಿದ್ದವನ ಕುಟುಂಬಕ್ಕೆ ಈಗ ಯಾರು ದಿಕ್ಕು?

A FOX TV Story
Published
ಬಿಜೆಪಿಯೇ ‘ಜೀವ’ ಅಂತಿದ್ದವನ ಕುಟುಂಬಕ್ಕೆ ಈಗ ಯಾರು ದಿಕ್ಕು?

5 Key Highlights

  • 1Preparing story highlights…
@Jeeva Jeeva.. ಈತನ ಬಗ್ಗೆ ಒಂದಷ್ಟು ವಿಚಾರಗಳನ್ನ ಹೇಳಲೇಬೇಕು. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಸೆಣೆಸಾಡುತ್ತಲೇ ಬದುಕಿದ ಹುಡುಗ.. ತಂದೆ ಚಿಕ್ಕ ವಯಸ್ಸಿನಲ್ಲೇ ವಿಧಿವಶ. ಅಪ್ಪ ಗಳಿಸಿದ ಆಸ್ತಿ ಇಲ್ಲ. ಹಣ ಅಂತಸ್ತು ಇಲ್ವೇ ಇಲ್ಲ. ತುತ್ತು ಅನ್ನಕ್ಕೂ ಪರದಾಡುವಂಥಾ ಪರಿಸ್ತಿತಿ ಇದ್ರೂ ತನ್ನ ಹಣೆಬರಹವನ್ನ ತಾನೇ ಬರೆದುಕೊಳ್ಳಲು ಆರಂಭಿಸಿದ್ದ. ಡಿಗ್ರಿ ಮುಗಿಸಿದ. ಆಗಾಗ ಫೋನ್ ಮಾಡಿ, ನಾನು ಸಿನಿಮಾ ರಂಣಗದಲ್ಲಿ ಮಿಂಚಬೇಕು ಅಂದಿದ್ದೀನಿ ಅಂತ ಹೇಳ್ತಾ ಇದ್ದ.ಅದೆಂಥಾ ಹಠವೋ ಇವನಿಗೆ. ಯಾರ್ ಯಾರ ಕೈಕಾಲು ಹಿಡಿದನೋ, ಯಾವ್ ಯಾವ ದೇವರಿಗೆ ಕೈ ಮುಗಿದನೋ, ಕೊನೆಗೂ ಒಂದೆರಡು ಸಿನಿಮಾಗಳಲ್ಲಿ ಬಣ್ನ ಹಚ್ಚಿದ. ಆದ್ರೆ ಆ ಸಿನಿಮಾಗಳು ತೆರೆಗೆ ಬರಲೇ ಇಲ್ಲ.


ಇದರ ನಡುವಲ್ಲೇ ರಾಜಕೀಯದ ಕಡೆ ವಾಲಿದ. ಕಲಬುರಗಿ ಜಿಲ್ಲೆ, ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಬೆನ್ನಿಗೆ ನಿಂತ. ಯಡ್ಯೂರಪ್ಪನವರನ್ನ ಅಪ್ಪಾಜಿ ಅಂತಲೇ ಕರೀತಿದ್ದ. ಮುಂದಿನ ಮುಖ್ಯಮಂತ್ರಿ ಅಪ್ಪಾಜಿ. ಸೇಡಂ ಕ್ಷೇತ್ರಕ್ಕೆ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ ಅಂತಲೇ ಫೇಸ್​​ಬುಕ್​ನಲ್ಲಿ ಅಪ್ಡೇಟ್ ಮಾಡ್ತಿದ್ದ. ಕಣ ಕಣದಲ್ಲೂ ಬಿಎಸ್​ವೈ ಮತ್ತು ರಾಜ್ ಕುಮಾರ್ ಪಾಟೀಲ್ ಈ ಎರಡೇ ಹೆಸರನ್ನು ತುಂಬಿಕೊಂಡಿದ್ದ. ಇದು ಇವನನ್ನ ಸೇಡಂ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷನನ್ನಾಗಿ ಮಾಡಿತ್ತು.


ಓಡಿದ್ರೂ ಕೆಲಸ ಹುಡುಕಿಕೊಳ್ಳಲಿಲ್ಲ. ಮಗ ಆಸರೆಯಾಗಬಹುದು ಅಂತಿದ್ದ ತಾಯಿ ಕನಸು ಈಡೇರಲೂ ಇಲ್ಲ. ಸಿನಿಮಾ ರಾಜಕೀಯ ಅಂತಲೇ ಬದುಕು ದೂಡ್ತಿದ್ದ. ಇದರ ನಡುವಲ್ಲೇ ಮದುವೆಯೂ ಆಯ್ತು. ಮಗನೂ ಹುಟ್ಟಿದ. ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ಈ ಜೀವ, ಹುಟ್ಟಿದ ಊರನ್ನು ಬಿಟ್ಟು ಹೊರ ಬಂದಿದ್ದ. ಆಡಿಕೊಳ್ಳುವವರ ನಡುವೆ ಎಷ್ಟು ದಿನ ಇರೋದು ಅಂತ ದೂರದೂರಲ್ಲಿ ಗೂಡು ಕಟ್ಟಿಕೊಂಡಿದ್ದ. ಈ ಜೀವಕ್ಕೆ ಬಿಜೆಪಿಯೇ ಜೀವ ಆಗಿತ್ತು. ಬಿಎಸ್​ ಯಡ್ಯೂರಪ್ಪನವರನ್ನೇ ಅಪ್ಪಾಜಿ ಅಂತಿದ್ದ. ಸೇಡಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜ್ ಕುಮಾರ್ ಪಾಟೀಲ್ ಹೃದಯ ಎಂಬಂತೆ ನೋಡ್ತಿದ್ದ. ಮನೆ, ಮಠ, ಕುಟುಂಬಕ್ಕಿಂತ ಬಿಜೆಪಿಯೇ ಜೀವ ಅಂತಿದ್ದ ಈ ಜೀವ, ಈಗ ಬದುಕಿಲ್ಲ.



ಕೆಲವು ದಿನಗಳ ಹಿಂದೆ ಮಗನ ಜವಳಿ ಕಾರ್ಯಕ್ರಮ (ಕೂದಲು ತೆಗೆಸುವ ಕಾರ್ಯಕ್ರಮ)ಕ್ಕೆ ಹೋಗುತ್ತಿರಬೇಕಾದ್ರೆ ಅಪಘಾತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಎದ್ದು ಬಂದು ಎಲ್ಲರನ್ನೂ ಹೊರಗೆಳೆದು ಎಲ್ಲರನ್ನೂ ಆಪತ್ತಿನಿಂದ ಕಾಪಾಡಿದ್ದ. ತನ್ನ ದೇಹದಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೇ ಎಲ್ಲರ ಜೀವ ಉಳಿಸಲು ಯತ್ನಿಸಿದ್ದ. ಆಸ್ಪತ್ರೆಗೆ ಸೇರಿಸಿದಾಗ ಆಪರೇಷನ್​ ಮಾಡಬೇಕು ಅಂದಾಗಲೂ ನನಗೆ ಅಂಥಾದ್ದೇನೂ ಆಗಿಲ್ಲ ಅಂತಲೇ ಇದ್ದ. ಅದೆಷ್ಟೋ ಸಮಯ ಕುಳಿತು ಎಲ್ಲರೊಂದಿಗೂ ಮಾತನಾಡಿದ್ದ. ಆದ್ರೆ ಆಪರೇಷನ್ ಆದ ನಂತರ ಸಾವು ಬದುಕಿನ ನಡುವೆ ಹೋರಾಟ ಆರಂಭವಾಯಿತು. ವಾರಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ವಿಧಿಯ ಜೊತೆಗೆ ಹೋರಾಡುತ್ತಲೇ ಇದ್ದ. ಆದ್ರೆ ವಿಧಿಯ ಮುಂದೆ ನರ ಮಾನವನ ಹೋರಾಟ ಎಂದೂ ಗೆದ್ದಿಲ್ಲ. ಈತನ ವಿಚಾರದಲ್ಲಿ ಆಗಿದ್ದೂ ಅದೇ. ಮೇ 1ನೇ ತಾರೀಕು ಮದುವೆಯಾದ ದಿನವೇ ಜೀವ ಬಿಟ್ಟಿದ್ದ.


ಜೀವ ಅಂತ ಕರೆಯೋದಕ್ಕೂ ಮೊದಲು, ಎಲ್ಲರೂ ಇವನನ್ನ ಕಾಳಪ್ಪ ಅಂತಲೇ ಕರೀತಿದ್ರು. ಕಾಳಪ್ಪ ಅನ್ನೋದು ಜೀವ ಮಡಿವಾಳನ ಮೊದಲ ಹೆಸರು. ಇವನು ಅದ್ಯಾಕೆ ತನ್ನ ಹೆಸರನ್ನ ಜೀವ ಎಂದು ಬದಲಿಸಿಕೊಂಡನೋ ಗೊತ್ತಿಲ್ಲ. ಹೆಸರಲ್ಲಿ ಜೀವ ಇಟ್ಕೊಂಡ. ಆದ್ರೆ ದೇಹದಲ್ಲೇ ಜೀವ ಉಳಿಯಲಿಲ್ಲ.

ಕುಟುಂಬಕ್ಕೆ ಜೀವ ಆಗಿದ್ದವನು ಈಗ ಬದುಕಿಲ್ಲ. ಅಪಘಾತದಿಂದ ಪತ್ನಿ ಸ್ಥಿತಿಯೂ ಗಂಭೀರವಾಗಿದೆ. ತಾಯಿಗೂ ಮಗನ ಅನುಪಸ್ಥಿತಿ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇರೋದು ಪುಟ್ಟ ಮಗ. ಬದುಕು ಸಾಗಿಸೋದು ಹೇಗೆ ಈ ಕುಟುಂಬ?

ವಿಚಿತ್ರ ಎಂದರೆ, ಜೀವ ಸಾವನ್ನೇ ಬಹಳಷ್ಟು ಜನ ಎದುರು ನೋಡ್ತಿದ್ರೇನೋ ಅನ್ನಿಸ್ತಿದೆ. ಜೀವ ಸಾವಿನ ನಮತರ ಕೆಲವರು ಬಿಜೆಪಿಯನ್ನು ಬೈಯುವಂಥಾ ಪೋಸ್ಟ್​ಗಳನ್ನು ಫೇಸ್​ಬುಕ್​ನಲ್ಲಿ ಟ್ಯಾಗ್ ಮಾಡಿದ್ದಾರೆ. ಅವರಿಗೆ ಜೀವ ಇಲ್ಲ ಅನ್ನೋದು ಗೊತ್ತಿಲ್ಲೊವೋ, ಅಥವ ರಾಜಕೀಯ ಎದುರಾಳಿ ಅಂತ ಟ್ಯಾಗ್ ಮಾಡಿದ್ರೋ ಗೊತ್ತಿಲ್ಲ. ಆದರೆ ಸಾವಿನಲ್ಲೂ ವೈರತ್ವ ಮೆರೆಯುತ್ತಿದ್ದಾರೆ ಕೆಲವರು.

ಬಡತನದೊಂದಿಗೆ ಹೋರಾಡಿ ಡಿಗ್ರಿ ಓದಿದೆ. ಹಳ್ಳಿಯಲ್ಲಿ ಹುಟ್ಟಿ ಬೆಳದರೂ ಛಲ ಬಿಡದೇ ಸಿನಿಮಾ ರಂಗಕ್ಕೂ ಕಾಲಿಟ್ಟೆ. ಛಲವಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಅಂತ ತೋರಿಸಿಕೊಡಲು ರಾಜಕೀಯದಲ್ಲೂ ಕಾಲಿಟ್ಟೆ. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಹೋರಾಡುತ್ತಲೇ ಬೆಳೆದೆ. ಆದ್ರೆ ಅಂತಿಮವಾಗಿ ವಿಧಿಯೇ ಗೆದ್ದು ಬಿಟ್ಟಿದೆ. ಆ ವಿಧಿ ಈಗ ನಿನ್ನ ಸಾವನ್ನು ನೋಡಿ ನಗುತ್ತಿದೆ. ನಿನ್ನ ಕುಟುಂಬದ ಕಣ್ಣೀರನ್ನು ನೋಡಿ ಗಹಗಹಿಸುತ್ತಿದೆ.

ಬದುಕಿದ್ದಷ್ಟು ದಿನವೂ ಬಿಜೆಪಿ, ಬಿಜೆಪಿ ಅಂತಿದ್ದ. ಅಪ್ಪಾಜಿ ಅಂತ ಬಿಎಸ್​ಯಡ್ಯೂರಪ್ಪನವರನ್ನ ಕರೀತಿದ್ದ. ಅಪ್ಪಾಜಿನೇ ಮುಂದಿನ ಸಿಎಂ ಅಂತಿದ್ದ. ಈಗ ಅವನಿಲ್ಲ. ಅವನ ಕುಟುಂಬವನ್ನು ಅಪ್ಪಾಜಿ ನೋಡಿಕೊಳ್ತಾರಾ? ಬಿಜೆಪಿ ಗೆಲ್ಲಿಸಿ, ರಾಜ್ ಕುಮಾರ್ ಪಾಟೀಲ್ ಗೆ ಜೈ ಅಂತ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಅಂತ ಪ್ರತಿ ದಿನ ಪ್ರತಿ ಕ್ಷಣ ಹೇಳ್ತಾನೇ ಇದ್ದ. ಕಣ್ನೀರಲ್ಲಿ ಮುಳುಗಿದ ಕುಟುಂಬವನ್ನು ಯಾರು ಕಾಪಾಡೋರು?

ರಾಜಕೀಯ ಪಕ್ಷಕ್ಕಾಗಿ ಬದುಕನ್ನು ಮುಡಿಪಿಡುವ ಬದಲಿಗೆ, ಕುಟುಂಬಕ್ಕಾಗಿ ಬದುಕನ್ನು ಮೀಸಲಿಟ್ಟಿದ್ದರೆ, ರಾಜಕೀಯ ಪಕ್ಷಕ್ಕಾಗಿ ಹೋರಾಡುವ ಬದಲು ನಿನ್ನ ಕುಟುಂಬದ ಆಸರೆಗಾಗಿ ಹೋರಾಡಿದ್ದರೆ, ರಾಜಕೀಯ ನಾಯಕರನ್ನ ಜೀವ ಅಂದುಕೊಳ್ಳುವ ಬದಲು ನಿನ್ನ ಕುಟುಂಬವೇ ಜೀವ ಅಂದುಕೊಂಡಿದ್ದರೆ, ಬಹುಶಃ ನಿನ್ನ ಬದುಕಿನ ದಿಸೆಯೇ ಬದಲಾಗಿರುತ್ತಿತ್ತೇನೋ.. ರಾಜಕೀಯದ ಗೀಳು ಅಂಟಿಸಿಕೊಂಡೆ. ಡಿಗ್ರಿ ಓದಿದರೂ ಊರಲ್ಲೇ ಉಳಿದು ಬಿಟ್ಟೆ. ಬಹುಶಃ ಒಂದು ಕೆಲಸ ಅಂತ ಹುಡುಕಿಕೊಂಡು ನಿನ್ನದೇ ದಾರಿ ಕಂಡು ಕೊಂಡಿದ್ದರೆ ನಿನ್ನ ಬದುಕಿನ ಚಿತ್ರಣವೇ ಬದಲಾಗುತ್ತಿತ್ತು. ಆದರೆ ನೀನು ರಾಜಕೀಯವನ್ನೇ ಜೀವ ಎಂದುಕೊಂಡೆ. ಆದರೀಗ ನಿನ್ನ ಕುಟುಂಬಕ್ಕೆ ಆಸರೆ ಯಾರು? ಅವರ ಕಣ್ಣೀರನ್ನು ಒರೆಸುವವರು ಯಾರು? ನಿನ್ನ ತಾಯಿಯ ಆ ಆರ್ತನಾದವನ್ನು ಆಲಿಸುವವರು ಯಾರು? ನಿನ್ನ ಮಗನ ಅಳುವನ್ನು ನಿಲ್ಲಿಸುವವರು ಯಾರು? ನೀನೇ ಜೀವ ಅಂದುಕೊಂಡು ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಿರೊ ಆ ನಿನ್ನ ಮಡದಿಯ ಅಳಲನ್ನು ಆಲಿಸುವವರು ಯಾರು?





ಸಂಬಂಧಿತ ವಿಷಯಗಳು

Explore in English

Browse these topics in English to find related stories.

ಈ ಸುದ್ದಿಯ ಬಗ್ಗೆ

Preparing an English story description…

ಕಾಮೆಂಟ್‌ಗಳು

RECENT POSTS

⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ

LIVE
#01RECENT POSTS

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02RECENT POSTS

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

#03RECENT POSTS

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#04RECENT POSTS

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

#05RECENT POSTS

ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್

#06RECENT POSTS

ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು

#07RECENT POSTS

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ

#08RECENT POSTS

ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

#09RECENT POSTS

ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ

#10RECENT POSTS

ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ

MYSTERY DECODED

🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ

LIVE

THE POLITICS

🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ

LIVE
ರಾಜಕೀಯಶೀಘ್ರದಲ್ಲೇ ಬರಲಿದೆ

THE STATES MAN

🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ

LIVE

NATION WATCH

🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ

LIVE

GLOBAL TODAY

🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ

LIVE
ಇಂದಿನ ವಿಶ್ವಶೀಘ್ರದಲ್ಲೇ ಬರಲಿದೆ

MOVIE WORLD

🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್

LIVE

BEHIND THE SPORTS

🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ

LIVE
ಕ್ರೀಡೆಯ ಹಿಂದೆಶೀಘ್ರದಲ್ಲೇ ಬರಲಿದೆ

BUSINESS SECRETS

💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು

LIVE

💡MOTIVATION MANTRA

💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ

LIVE

🔍THE EXPLAINERS

🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು

LIVE

🙏GOD IS GREAT

🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು

LIVE

😂THE FUN FACTORY

😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು

LIVE

❤️LOVE IS LIFE

❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ

LIVE

🎥TRENDING VLOGS

🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ

LIVE
4 columns below in ONE ROW - Logo | Title | Navigation | Languages
NEW - Replaces Old Left/Right/Top/Breaking/Hero - 5 columns below in ONE ROW - WIRED
Advertising - Partner images/videos for homepage hero - 5 columns ONE ROW
NEW - Replaces Old Article Body Ads Images/Videos - 3 columns ONE ROW - WIRED
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.

A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows. A FOX TV.com - Brings Breaking news, Headlines of the days, top stories from India, United states, Russia and other contries