ಮತದಾನ ಪ್ರಕ್ರಿಯೆ ಮುಗಿದಿದೆ. ಇನ್ನೇನಿದ್ರೂ ಫಲಿತಾಂಶದ ಲೆಕ್ಕಾಚಾರ ಮಾತ್ರ ಬಾಕಿ ಇದೆ. ಬಿಜೆಪಿಗೆ ಯಾರ್ ಯಾರು ಬೆಂಬಲ ನೀಡ್ತಾರೆ ಅನ್ನೋ ಲೆಕ್ಕಾಚಾರ ಈಗ ಬಿಸಿ ಬಿಸಿ
ಚರ್ಚೆಯಾಗ್ತಿದೆ. ಕೆಲವೊಂದು ಲೆಕ್ಕಾಚಾರದ ಪ್ರಕಾರ, ಮೋದಿಗೆ ಮೂವರು
ಮಹಿಳೆಯರು ಸಾಥ್ ನೀಡಿದ್ರೆ,
ಮೋದಿ ಪ್ರಧಾನಿಯಾಗೋದು ಗ್ಯಾರಂಟಿಯಾಗಿದೆ..
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ
ಮಾಯಾವತಿ ಮತ್ತು ತಮಿಳುನಾಡಿನ ಜಯಲಲಿತ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ.
ಬಿಜೆಪಿ ಮೇಲೆ ‘ಮಮತೆ’
ತೃಣಮೂಲ ಕಾಂಗ್ರೆಸ್ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ 2001ರವೆರೆಗೆ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಗೆ ಸಪೋರ್ಟ್ ನೀಡ್ತಿದ್ರು.. ಆದ್ರೆ ಕೆಲವರು ಅನಿವಾರ್ಯಕಾರಣಗಳಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಜೈ
ಅಂದ್ರು,.. ಆದ್ರೆ ಮತ್ತೆ 2004
ರಲ್ಲಿ ಎನ್ಡಿಗೆ ಬೆಂಬಲ ವ್ಯಕ್ತಪಡಿಸಿದ್ರು.. ಆದ್ರೆ
ಮತ್ತೆ 2009 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡಿದ್ರು.. ಹೀಗೆ ಪ್ರತಿ ಚುನಾವಣೆಗೂ ತಮ್ಮ ಮೈತ್ರಿಯನ್ನು ಬದಲಿಸ್ತಾ ಇರೋ ಮಮತಾ ಬ್ಯಾನರ್ಜಿ, ಈಸಲ ಬಿಜೆಪಿಯನ್ನ ಬೆಂಬಲಿಸೋ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ಗಜ ‘ಮಾಯೆ’
ಇನ್ನು ಬಿಎಸ್ಪಿ ನಾಯಕಿ ಮಾಯಾವತಿ ಕೂಡ 1995 ಹಾಗೂ 2002 ರಲ್ಲಿ ಬಿಜೆಪಿ ಬೆಂಬಲಿದಿಂದಲೇ, ಉತ್ತರ ಪ್ರದೇಶದಲ್ಲಿ
ಸಿಎಂ ಆಗಿದ್ರು.. ಹೀಗಾಗಿ ಮೋದಿಯನ್ನು ವಿರೋಧಿಸಿದ್ರೂ, ಆಂತರಿಕವಾಗಿ ಬಿಜೆಪಿ
ಮೇಲೆ ಮಾಯಾವತಿಗೆ ಒಲವಿದೆ.ಹೀಗಾಗಿ
ಫಲಿತಾಂಶದ ನಂತರ ಎನ್ಡಿಎ ಬೆಂಬಲಿಸುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ..
ಕಮಲಕ್ಕೆ ‘ಜಯ’
ತಮಿಳುನಾಡಿನ ಜಯಲಲಿತ ಕೂಡ 2004 ರವೆರೆಗೆ ಎನ್ಡಿಎಗೆ
ಬೆಂಬಲ ನೀಡಿದ್ತಿದ್ರು.. ಅದ್ರೆ ಅನಿವಾರ್ಯ ಕಾರಣಗಳಿಂದ ಎನ್ಡಿಎಯಿಂದ ಹೊರ ಬಂದಿದ್ರು.. ಸುಮಾರು 10 ವರ್ಷಗಳ ಕಾಲ, ಜಯಲಲಿತಾ ಎನ್ಡಿಎಯಿಂದ ದೂರ ಉಳಿದಿದ್ರು.. ಆದ್ರೆ
ಇದೀಗ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿರೋದ್ರಿಂದ, ಮುಂದಿನ
ದಿನಗಳಲ್ಲಿ, ಜಯಲಲಿತ ಕೂಡ ಎನ್ಡಿಎಗೆ ಬೆಂಬಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಆದ್ರೆ ಇದುವರೆಗೂ, ಮಾಯಾವತಿಯಾಗಲಿ, ಮಮತಾ ಬ್ಯಾನರ್ಜಿಯಾಗಲಿ, ಜಯಲಲಿತಾ ಆಗ್ಲಿ, ಎನ್ಡಿಎಯನ್ನು ಬೆಂಬಲಿಸುವ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಆದ್ರೆ ಮೋದಿಗೆ ಈ ಮೂವರು ಮಹಿಳೆಯರ ಬೆಂಬಲ ಸಿಕ್ರೆ ಬಹುತೇಕ ಪ್ರಧಾನಿ ಪಟ್ಟ ಏರೋದು
ಗ್ಯಾರಂಟಿ ಅಂತ ಹೇಳಲಾಗ್ತಿದೆ.. ಆದ್ರೆ ಬ್ಯಾನರ್ಜಿ, ಮಾಯಾವತಿ ಮತ್ತು ಜಯಲಲಿತಾ ಎಲ್ಲರೂ ಸೇರಿ ತೃತೀಯ ರಂಗದ ಬೆಂಬಲ ಪಡೆದುಕೊಂಡು, ತಾವೇ ಪ್ರಧಾನಿ ಪಟ್ಟಕ್ಕೇರುವ ಒಳ ಸಂಚು ಕೂಡ ನಡೆಸುತ್ತಿದ್ದಾರೆ.. ಹೀಗಾಗಿ ಮೋದಿಗೆ ಇವರ್ಯಾರೂ ಬೆಂಬಲಿಸುವುದಿಲ್ಲ ಎಂಬ ಅಂಶಗಳು ಗುಪ್ತ ಮೂಲಗಳಿಂದ ಕೇಳಿ ಬರ್ತಿವೆ.
ಕಾಮೆಂಟ್ಗಳು
ಮೇ 12, 2014ವಿದ್ಯುಮಾನಗಳು
📰RECENT POSTS
⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.
⚡ ಸಂಪಾದಕರ ಆಯ್ಕೆ: ಇಂದಿನ ಪ್ರಮುಖ ಸುದ್ದಿ, ವಿಶೇಷ ಕಥೆಗಳು ಮತ್ತು ವೀಡಿಯೋ ವರದಿ
📰 ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್, ಲೈವ್ ಅಪ್ಡೇಟ್ ಮತ್ತು ವೀಡಿಯೋ ವರದಿ
🕵️ ನಿಗೂಢ ರಹಸ್ಯಗಳು, ಅದ್ಭುತ ಸತ್ಯಗಳು, ಹೇಳದ ಕಥೆಗಳ ಸಂಪೂರ್ಣ ವಿಶ್ಲೇಷಣೆ
🏛️ ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ಮತ್ತು ಸಂಸತ್ ವಿಶ್ಲೇಷಣೆ
🗺️ ಕರ್ನಾಟಕದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ, ಆಡಳಿತ ಮತ್ತು ಅಭಿವೃದ್ಧಿ ವರದಿ
🌍 ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ನೀತಿ ನಿರ್ಧಾರಗಳು
🌐 ಜಗತ್ತಿನ ತಾಜಾ ಘಟನೆಗಳು, ಅಂತರರಾಷ್ಟ್ರೀಯ ಸುದ್ದಿ ಕನ್ನಡದಲ್ಲಿ ಸಂಪೂರ್ಣ ವಿವರ
🎬 ಸ್ಯಾಂಡಲ್ವುಡ್, ಹಾಲಿವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
🏆 ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲ ಕ್ರೀಡಾ ಸುದ್ದಿ ಮತ್ತು ತೆರೆಮರೆಯ ಕಥೆಗಳು
💼 ವ್ಯಾಪಾರ, ಷೇರು ಮಾರುಕಟ್ಟೆ, ಸ್ಟಾರ್ಟ್ಅಪ್ ಮತ್ತು ಯಶಸ್ಸಿನ ಕಥೆಗಳು
A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world
Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows.
A FOX TV.com - Brings Breaking news, Headlines of the days, top stories from India, United states, Russia and other contries
ಕಾಮೆಂಟ್ಗಳು