⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE

THE EDITOR'SCHOICE
A FOX TV - THE EDITOR'S CHOICE#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

JUST IN
#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

MOST VIEWED
#01

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#02

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

BREAKINGSTORIES
THE EDITOR'S CHOICE#01

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

LATEST#01'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡLATEST#02ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳುLATEST#03ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರLATEST#04ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆLATEST#05ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್LATEST#06ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತುLATEST#07ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತLATEST#08ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

ಎಲ್ಲರನ್ನೂ ನಗಿಸಿದ ಧೀರೇಂದ್ರ ಗೋಪಾಲ್‌ ಸಾಯುವ ಮುನ್ನ ಅತ್ತುಬಿಟ್ಟರು

A FOX TV Story
Published
ಎಲ್ಲರನ್ನೂ ನಗಿಸಿದ ಧೀರೇಂದ್ರ ಗೋಪಾಲ್‌ ಸಾಯುವ ಮುನ್ನ ಅತ್ತುಬಿಟ್ಟರು

5 Key Highlights

  • 1Preparing story highlights…



ನಿಮಗೆ ಕನ್ನಡ ಸಿನೆಮಾದಲ್ಲಿ ನಟಿಸಿದ ಹೆಚ್. ಎನ್. ಗೋಪಾಲರಾವ್ ಅವರು ಗೊತ್ತಾ? ಹೀಗೆ ಕೇಳಿದ್ರೆ ಯಾರಿಂದಲೂ ಉತ್ತರ ಸಿಗುವುದೇ ಇಲ್ಲ.. ಇದೇ ಪ್ರೆಶ್ನೆಯನ್ನು ಸ್ವಲ್ಪ ತಿರುಚಿ ಕೇಳಿ ನೋಡಿ.. ಆಗ ಬರುವ ಉತ್ತರವೇ ವಿಭಿನ್ನ

ನಿಮಗೆ ಶಿವನೇ ಶಂಭುಲಿಂಗಾ..! ಅನ್ನೋ ಡೈಲಾಗ್ ಗೊತ್ತಾ? ಅಂತ ಯಾರಾದ್ರೂ ಕನ್ನಡಿಗರಿಗೆ ಕೇಳಿ. ಅವರು ಹೇಳುವುದು ಒಂದೇ.. ಯಾರಿಗ್ರೀ ಗೊತ್ತಿಲ್ಲ? ನಮ್ ಧೀರೇಂದ್ರ ಗೋಪಾಲ್‌ ಅವರದ್ದು ಕಣ್ರೀ.. ಅಂತ..

ಹೌದು.. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಶಿವನೇ ಶಂಭುಲಿಂಗ ಅನ್ನೋ ಡೈಲಾಗ್ ಒಂದೇ ಸಾಕು ಮಹೋನ್ನತ ಮಾತಿನ ಮಾಣಿಕ್ಯ, ಹಾಸ್ಯ ಸಾರ್ವಭೌಮ ಧೀರೇಂದ್ರ ಗೋಪಾಲ್ ಅವರ ಪರಿಚಯ ಹೇಳೋದಕ್ಕೆ. ಎಂತಹ ಖಳನಾಯಕನ ಪಾತ್ರವನ್ನು ಕೊಟ್ಟರೂ ಅದರೊಳಗೆ ಹಾಸ್ಯದ ಜೇನು ಬೆರೆಸಿ ಆ ಪಾತ್ರಕ್ಕೆ ಮತ್ತಷ್ಟು ಮೆರುಗು ತಂದುಕೊಡಬಲ್ಲ ಶಕ್ತಿ ಹೊಂದಿದ ಹಾಸ್ಯ ದೊರೆ ಅವರು.

ಧೀರೇಂದ್ರ ಗೋಪಾಲ್ ಹೆಚ್ಚು ಕಾಣಿಸಿಕೊಂಡಿದ್ದು ಖಳನಾಯಕನ ಪಾತ್ರಗಳು. ಆದರೆ ಅವರ ಪಾತ್ರಗಳಲ್ಲಿ ಅದ್ಭುತ ಸಂಭಾಷಣಾ ಚತುರತೆ ಇತ್ತು. ಹೀಗಾಗಿಯೇ ಅಂದಿನ ಕಾಲದಲ್ಲಿ ಧೀರೇಂದ್ರ ಗೋಪಾಲ್‌ ಅವರ ಕಾಲ್‌ಶೀಟ್‌ಗಾಗಿ ಕಾದು ಕುಳಿತಿರುತ್ತಿದ್ದರು ಸಿನೆಮಾ ನಿರ್ಮಾಪಕರು.

ಧೀರೇಂದ್ರ ಗೋಪಾಲರು ಹುಟ್ಟಿದ್ದು ಏಪ್ರಿಲ್ 12, 1940 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದ ಜೋಡಿಗುಬ್ಬಿ ಎಂಬ ಗ್ರಾಮದಲ್ಲಿ ಜನಿಸಿದ ಧೀರೇಂದ್ರ ಗೋಪಾಲ್ ಅವರ ಮೊದಲಿನ ಹೆಸರು ಹೆಚ್. ಎನ್. ಗೋಪಾಲರಾವ್.

ಆರಂಭದಿಂದಲೂ ರಂಗಭೂಮಿಯತ್ತ ತಮ್ಮ ಚಿತ್ತವನ್ನು ಕೇಂದ್ರೀಕರಿಸಿಕೊಂಡು ಬೆಳೆದ ಧೀರೇಂದ್ರ ಗೋಪಾಲ್‌ ಅವರ ಬದುಕಿಗೆ ತಿರುವು ಸಿಕ್ಕಿದ್ದು ಶಾಲೆಯಲ್ಲಿ. ಒಮ್ಮೆ ಅವರ ಶಾಲೆಯಲ್ಲಿ ಸಮಾರಂಭವೊಂದನ್ನು ಏರ್ಪಡಿಸಿದ್ದರು. ಅಲ್ಲಿಗೆ ಗುಬ್ಬಿ ವೀರಣ್ಣನವರೂ ಆಗಮಿಸಿದ್ದರು. ಆಗ ಧೀರೇಂದ್ರ ಗೋಪಾಲ್‌ ಅವರ ಏಕಪಾತ್ರಾಭಿನಯವನ್ನು ಕಂಡು ಮೆಚ್ಚಿಕೊಂಡರು. ಧೀರೇಂದ್ರ ಗೋಪಾಲರಲ್ಲಿ ಅದ್ಭುತ ಕಲಾವಿದನನ್ನು ಕಂಡರು ಗುಬ್ಬಿ ವೀರಣ್ಣನವರು.

ನಂತರ ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಆಹ್ವಾನ ನೀಡಿದರು.
ಆರಂಭದಲ್ಲಿ 'ವಾಲಿ' ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದ ಧೀರೇಂದ್ರ ಗೋಪಾಲರು, ದೇವೇಂದ್ರ, ದುರ್ಯೋಧನನ ಪಾತ್ರದಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದರು. 'ಸರ್ವಮಂಗಳ ನಾಟಕ ಸಭಾ'ದ ಟಿಪ್ಪು ಸುಲ್ತಾನ್,  'ಮುದುಕನ ಮದುವೆ' ಧೀರೇಂದ್ರ ಗೋಪಾಲರ ಪ್ರಸಿದ್ಧ ನಾಟಕಗಳು.

ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರು ಚಿಕ್ಕದೊಂದು ಪಾತ್ರವೊಂದನ್ನು ಮಾಡುವಂತೆ ಧೀರೇಂದ್ರ ಗೋಪಾಲರಿಗೆ ಆಹ್ವಾನಿಸಿದರು. ಪಾತ್ರ ಚಿಕ್ಕದಾದರೂ ಅದಕ್ಕೆ ಜೀವ ತುಂಬುವ ಕುಶಲತೆ ಅವರಿಗಿತ್ತು. ಹೀಗಾಗಿಯೇ ಚಿಕ್ಕ ಪಾತ್ರದ ಅದ್ಭುತ ನಟನೆಯಿಂದಾಗಿ ಮುಂದೆ ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದಲ್ಲಿ ಕಾಣಿಸಿಕೊಂಡರು.

‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರವನ್ನಂತೂ ಯಾರೂ ಮರೆಯಲು ಸಾಧ್ಯವೇ ಇಲ್ಲ. ಈ ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದುಬಿಟ್ಟಿತು.

ಕಷ್ಟವನ್ನು ಕಣ್ಣೆದುರು ಕಂಡರೆ ಅದಕ್ಕೆ ಸ್ಪಂದಿಸುತ್ತಿದ್ದ ಕರುಣಾಮಯಿಯಾಗಿದ್ದರು ಧೀರೇಂದ್ರ ಗೋಪಾಲ್‌. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.

ಧೀರೇಂದ್ರ ಗೋಪಾಲರು ಮೂಲತಃ ರಂಗಭೂಮಿಯಿಂದ ಬೆಳೆದವರು. ಆದರೆ ನಂತರದ ದಿನಗಳಲ್ಲಿ ರಂಗಭೂಮಿಗಳು ನಷ್ಟಕ್ಕೆ ತುತ್ತಾದವು. ಅಂತಹ ಸಂದರ್ಭದಲ್ಲಿಯೂ ಕೂಡ ಧೀರೇಂಧ್ರ ಗೋಪಾಲ್‌ ಅವರಿಗೆ ಬೇಡಿಕೆ ಕಡಿಮೆಯಾಗಿರಲಿಲ್ಲ. ಅವರು ಯಾವುದೇ ನಾಟಕದಲ್ಲಿ ಅಭಿನಯಿಸಿದರೂ, ಸಂಜೆ ಮನೆಗೆ ಬರುವಾಗ ಅವರ ಸಂಪಾದನೆಯ ಬಹಳಷ್ಟು ಭಾಗವನ್ನು ನಷ್ಟಕ್ಕೊಳಗಾದ ರಂಗಭೂಮಿ ಮಾಲೀಕನಿಗೆ ನೀಡುತ್ತಿದ್ದರು. ಹೀಗೆ ದಾನ ಮಾಡುತ್ತ ಬಂದವರು ಸ್ವತಃ ತಾವೇ ಉಪವಾಸದ ದಿನಗಳನ್ನು ಕಳೆದಿದ್ದಾರೆ ಎಂಬುದು ನಿಜಕ್ಕೂ ದುರಂತವೇ ಸರಿ.


ಲಾಭಕ್ಕಾಗಿ ಧೀರೇಂದ್ರ ಗೋಪಾಲರ ಹಿಂದೆ ಬಿದ್ದ ಸಿನೆಮಾ ಮಂದಿ ನಂತರದ ದಿನಗಳಲ್ಲಿ ಇವರತ್ತ ತಲೆ ಕೂಡ ಹಾಕಿ ನೋಡಲಿಲ್ಲ ಎಂಬುದು ಅವರ ಪತ್ನಿಯ ದುಗುಡ. ಧೀರೇಂದ್ರ ಗೋಪಾಲ್‌ ಸಾವಿಗೀಡಾದಾಗ ನೋಡಲು ಬಂದವರು ಕೇವಲ ದೊಡ್ಡಣ್ಣ ಮತ್ತಿಬ್ಬರು ಮಂದಿ ಮಾತ್ರ.

ಕೊನೆಯ ದಿನಗಳಲ್ಲಿ ಧೀರೇಂದ್ರ ಗೋಪಾಲರಿಗೆ ಕಾಡಿದ್ದು ಸಾಲದ ಶೂಲಗಳು. ಬಂದಿದ್ದನ್ನೆಲ್ಲಾ ದಾನ ಮಾಡುತ್ತಿದ್ದ ಧೀರೇಂದ್ರ ಗೋಪಾಲರಿಗೆ ನಂತರದ ದಿನಗಳಲ್ಲಿ ಯಾರೂ ಕೂಡ ಸೂಕ್ತವಾಗಿ ಸಹಾಯ ಮಾಡಲಿಲ್ಲ. ಇವರ ಅಭೂತ ಪೂರ್ವ ಅಭಿನಯಕ್ಕಾಗಿ, ಸಿನೆಮಾ ಸಾಧನೆಗಾಗಿ 1998 ರಲ್ಲಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. ಆದ್ರೆ ರಾಜ್ಯ ಪ್ರಶಸ್ತಿ ದೊರೆತವರಿಗೆ ಸರ್ಕಾರದ ವತಿಯಿಂದ ಸೈಟ್ ಸಿಗುತ್ತದೆ. ಧೀರೇಂದ್ರ ಗೋಪಾಲರ ವಿಷಯದಲ್ಲಿ ಸರ್ಕಾರ ಕೂಡ ದಿವ್ಯ ನಿರ್ಲಕ್ಷ ತೋರಿತ್ತು. ಯಾಕಂದ್ರೆ ಸರ್ಕಾರದ ಸೈಟ್‌ ಧೀರೇಂದ್ರ ಗೋಪಾಲ್ ಅವರಿಗೆ ಸಿಗಲಿಲ್ಲ. ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಕೂಡ ಲಭಿಸಿತು. ಆದ್ರೆ ಅದರಿಂದ ಧೀರೆಂದ್ರ ಗೋಪಾಲ್‌ ಅವರ ಬದುಕಿಗೆ ಯಾವುದೇ ರೀತಿಯ ಆಧಾರ ಕೂಡ ಸಿಗಲಿಲ್ಲ. 

2000 ರಲ್ಲಿ ಎಸ್. ನಾರಾಯಣ್ ನಿರ್ದೇಶನದ 'ಅಂಜಲಿ ಗೀತಾಂಜಲಿ' ಸಿನೆಮಾದಲ್ಲಿ ಧೀರೇಂದ್ರ ಗೋಪಾಲರು ನಟಿಸುತ್ತಿದ್ದರು. ಅವರಿಗೆ ಅನಾರೋಗ್ಯವಿದ್ದರೂ ಸಿನೆಮಾ ಕೆಲಸವನ್ನು ಮಾತ್ರ ಎಂದಿಗೂ ನಿಲ್ಲಿಸಲಿಲ್ಲ. ಬಹುಶಃ ಧೀರೇಂದ್ರ ಗೋಪಾಲರ ಅಭಿನಯ ಚಾತುರ್ಯತೆ ಆ ದೇವರಿಗೂ ಇಷ್ಟವಾಯಿತು ಎನಿಸುತ್ತದೆ. ನಮ್ಮನ್ನು ರಂಜಿಸು ಬಾ ಎಂದು ಕರೆದುಕೊಂಡು ಬಿಟ್ಟ ಆ ಭಗವಂತ. ಡಿಸೆಂಬರ್ 25, 2000 ದಂದು ಹೃದಯಾಘಾತದಿಂದಾಗಿ ಧೀರೇಂದ್ರ ಗೋಪಾಲರು ಬದುಕಿಗೆ ವಿದಾಯ ಹೇಳಿದರು.

ಧೀರೇಂದ್ರ ಗೋಪಾಲ್‌ ಅವರ ಬದುಕಿನ ಕೊನೆಯ ದಿನಗಳು ನರಕಕ್ಕೆ ಸಮನಾಗಿದ್ದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ. ಬದುಕಿನ ನೋವುಗಳನ್ನು ಮರೆಯುವ ಸಲುವಾಗಿ ಧೀರೇಂದ್ರ ಗೋಪಾಲ್ ಅವರು ಕುಡಿತದ ಮೊರೆ ಹೋದರು.. ಸದಾ ಕಾಲ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಸಾರ್ವಭೌಮ ಕೊನೆಯ ದಿನಗಳಲ್ಲಿ ಬದುಕಿನ ನೋವುಗಳನ್ನು ತಾಳಲಾರದೇ ಕಣ್ಣೀರು ಹಾಕಿಬಿಟ್ಟರು.

ಓ ಬದುಕೇ... ನೀನೆಷ್ಟು ಕ್ರೂರಿ..?
ನಗಿಸಿ ಅಳಿಸುವೆ ಏಕೆ ಯಾಮಾರಿ??

ಸಂಬಂಧಿತ ವಿಷಯಗಳು

Explore in English

Browse these topics in English to find related stories.

ಈ ಸುದ್ದಿಯ ಬಗ್ಗೆ

Preparing an English story description…

ಕಾಮೆಂಟ್‌ಗಳು

RECENT POSTS

⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ

LIVE
#01RECENT POSTS

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02RECENT POSTS

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

#03RECENT POSTS

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#04RECENT POSTS

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

#05RECENT POSTS

ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್

#06RECENT POSTS

ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು

#07RECENT POSTS

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ

#08RECENT POSTS

ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

#09RECENT POSTS

ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ

#10RECENT POSTS

ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ

MYSTERY DECODED

🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ

LIVE

THE POLITICS

🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ

LIVE
ರಾಜಕೀಯಶೀಘ್ರದಲ್ಲೇ ಬರಲಿದೆ

THE STATES MAN

🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ

LIVE

NATION WATCH

🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ

LIVE

GLOBAL TODAY

🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ

LIVE
ಇಂದಿನ ವಿಶ್ವಶೀಘ್ರದಲ್ಲೇ ಬರಲಿದೆ

MOVIE WORLD

🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್

LIVE

BEHIND THE SPORTS

🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ

LIVE
ಕ್ರೀಡೆಯ ಹಿಂದೆಶೀಘ್ರದಲ್ಲೇ ಬರಲಿದೆ

BUSINESS SECRETS

💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು

LIVE

💡MOTIVATION MANTRA

💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ

LIVE

🔍THE EXPLAINERS

🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು

LIVE

🙏GOD IS GREAT

🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು

LIVE

😂THE FUN FACTORY

😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು

LIVE

❤️LOVE IS LIFE

❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ

LIVE

🎥TRENDING VLOGS

🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ

LIVE
4 columns below in ONE ROW - Logo | Title | Navigation | Languages
NEW - Replaces Old Left/Right/Top/Breaking/Hero - 5 columns below in ONE ROW - WIRED
Advertising - Partner images/videos for homepage hero - 5 columns ONE ROW
NEW - Replaces Old Article Body Ads Images/Videos - 3 columns ONE ROW - WIRED
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.

A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows. A FOX TV.com - Brings Breaking news, Headlines of the days, top stories from India, United states, Russia and other contries