⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE

THE EDITOR'SCHOICE
A FOX TV - THE EDITOR'S CHOICE#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

JUST IN
#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

MOST VIEWED
#01

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#02

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

BREAKINGSTORIES
THE EDITOR'S CHOICE#01

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

LATEST#01'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡLATEST#02ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳುLATEST#03ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರLATEST#04ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆLATEST#05ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್LATEST#06ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತುLATEST#07ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತLATEST#08ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

ನಾಗರಕಟ್ಟೆ ಶಂಕ್ರಣ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!

A FOX TV Story
Published
ನಾಗರಕಟ್ಟೆ ಶಂಕ್ರಣ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು..!

5 Key Highlights

  • 1Preparing story highlights…
 ಶಂಕರ್ ನಾಗ್.. ಹೆಸರಿನಲ್ಲೇ ಶಕ್ತಿ ಇದೆ. ಹೊಸತನದ ಚೈತನ್ಯವಿದೆ.. ಹೊಸ ಪ್ರಯೋಗದ ಕನಸಿದೆ. ಕನ್ನಡ ಎಂದರೆ ಸಾಕು ಸೆಟೆದು ನಿಲ್ಲುವ ತ್ಯಾಗದ ಭಾವನೆ ಶಂಕರ್‌ ನಾಗ್‌ ಎಂಬುಹ ಹೆಸರಿನಲ್ಲಿದೆ. ಹೌದು ಶಂಕರ್‌ ನಾಗ್‌ ಚಿರಾಯು. ಭೌತಿಕವಾಗಿ ಕಣ್ಣೆದುರು ಇಲ್ಲದಿದ್ದರೂ, ಮಾನಸಿಕವಾಗಿ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದ ರಾಜ.. ಈ ಆಟೋ ರಾಜ ಶಂಕ್ರಣ್ಣ.

ನಾಗರಕಟ್ಟೆ ಶಂಕರ್ ಅನ್ನೋ ಹೆಸರಿನಿಂದ ಬದುಕಿನ ಪಯಣ ಆರಂಭಿಸಿದ ಶಂಕರ್‌ ನಾಗ್‌ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಮಹತ್ತರವಾದ ಕೊಡುಗೆ ನೀಡಿದ ಸೃಜನಶೀಲ ವ್ಯಕ್ತಿ. ನಟ, ನಿರ್ಮಾಪಕ, ನಿದೇರ್ಶಕ, ಬರಹಗಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ ಶಂಕರ್‌ ನಾಗ್‌ ಅಭಿಮಾನಿಗಳಿಗೆ ಮಾತ್ರ ಎಂದಿಗೂ ಆಟೋ ರಾಜನಾಗಿಯೇ ಉಳಿದಿದ್ದಾರೆ.

ಶಂಕರ್‌ನಾಗ್‌ ಅವರನ್ನು ಬಾಲ್ಯದಲ್ಲಿ ಭವಾನಿ ಶಂಕರ್‌ ಎಂದು ಕರೆಯುತ್ತಿದ್ದರಂತೆ.

ನವೆಂಬರ್ 9,1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಜನಿಸಿದರು. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ. ಬಾಲ್ಯದಲ್ಲಿ ಪ್ರೀತಿಯಿಂದ ಭವಾನಿ ಶಂಕರ್ ಎಂದು ಇವರ ತಂದೆ ಕರೆಯುತ್ತಿದ್ದರು. 

ಶಂಕರ್‌ನಾಗ್‌ ಮೊಟ್ಟ ಮೊದಲು ಕಾಲಿಟ್ಟಿದ್ದು ಮರಾಠಿ ರಂಗಭೂಮಿಗೆ.

ಶಂಕರ್ ನಾಗ್ ತಮ್ಮ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು. ಅಲ್ಲಿ ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಶಿತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿಯಲ್ಲಿ ತಮ್ಮನ್ನು ತಾವು  ತೊಡಗಿಕೊಂಡರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮೊಟ್ಟ ಮೊದಲ ಮರಾಠಿ ಚಿತ್ರದ ಹೆಸರು ’22 ಜೂನ್ 1897’.  ಈ ಚಿತ್ರ ಎಷ್ಟು ಪ್ರಖ್ಯಾತಿಗೊಂಡಿತ್ತು ಎಂದರೆ, ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು. ಆರಂಭದಲ್ಲೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಕನ್ನಡಿಗ ಶಂಕರ್‌ನಾಗ್‌.. ಅದೂ ಅನ್ಯ ಭಾಷೆಯಲ್ಲಿ ಸಾಧಿಸಿ ತೋರಿಸಿದ ಸಾಧಕ.

ಶಂಕರ್‌ನಾಗ್‌ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ಅಣ್ಣ ಅನಂತ್‌ ನಾಗ್‌ ಬ್ಯಾಂಕ್‌ ನೌಕರಿಗೇರಿದರು. ಅಣ್ಣನಂತೆ ತಮ್ಮನೂ ಕೂಡ ಬ್ಯಾಂಕ್ ನೌಕರಾನಾದರೂ ನಂತರದಲ್ಲಿ ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು.

ಗಿರೀಶ್‌ ಕಾರ್ನಾಡ್‌ ಅವರ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶಂಕರ್‌ನಾಗ್‌
 
ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಶಂಕರ್‌ನಾಗ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಳಿಸಿದರು ಶಂಕರ್‌ ನಾಗ್‌. ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಸತತ 12 ವರ್ಷಗಳ ಕಾಲ ಕನ್ನಡದಲ್ಲಿ ಸುಮಾರು 90 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು.

ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಸೇರಿದಂತೆ ಕೆಆರ್‌ ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ ಕೃತಿಗಳನ್ನು ನಾಟಕಗಳನ್ನಾಗಿ ರೂಪಿಸಿ ಜನರ ಮನದಲ್ಲಿ ಉಳಿಯುವಂತೆ ಮಾಡಿದ ಕ್ರಿಯೇಟಿವಿಟಿಯ ಹರಿಕಾರ ಶಂಕರ್‌ ನಾಗ್‌.

ದೇಶದಲ್ಲೇ ದಾಖಲೆ ಮಾಡಿದ "ಮಾಲ್ಗುಡಿ ಡೇಸ್‌" ಗೆ ಶಂಕರ್‌ನಾಗ್‌ ನಿರ್ದೇಶನ.

ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಧಾರಾವಾಹಿ ಶಂಕರ್‌ನಾಗ್‌ ಕ್ರಿಯೇಟಿವಿಟಿಯಿಂದ ಮೂಡಿ ಬಂದಿದ್ದು ,ಇಂದೂ ಸಹ ಹೆಚ್ಚು ಜನ ಪ್ರಿಯತೆಯನ್ನು ಗಳಿಸಿದೆ. ಮರು ಪ್ರಸಾರಗೊಳ್ಳುತ್ತಿದೆ. ಪಂಡಿತರು, ಬುದ್ಧಿ ಜನಾಂಗದಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್

ಶಂಕರ್‌ನಾಗ್‌ ಬದುಕು ಮತ್ತು ಕನಸುಗಳು

ಶಂಕರ್ ನಾಗ್ ಅವರು ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟು ಪ್ರೀತಿಸಿ ನಂತರ ಮದುವೆಯಾದರು. ಇವರ ಪ್ರೀತಿಗೆ ಸಾಕ್ಷಿಯಾಗಿ ಕಾವ್ಯ ಎಂಬ ಮಗಳು ಕೂಡ ಇದ್ದಾಳೆ.

ಶಂಕರನಾಗ್ ಅವರಿಗೆ ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂಬ ಆಸೆ ಇತ್ತು. ಆದ್ರೆ ವಿಧಿ ವಿಪರ್ಯಾಸವೆಂದರೆ, ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ಅವರು ಅಪಘಾತದಲ್ಲಿ ದುರ್ಮರಣಕ್ಕೀಡಾದರು. ಆದ್ರೆ ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ಆ ರಂಗಮಂದಿರಕ್ಕೆ"ರಂಗಶಂಕರ" ಎಂದು ಹೆಸರಿಟ್ಟಿದ್ದಾರೆ.

ಅಣ್ಣಾವ್ರ ಸಿನೆಮಾ ನಿರ್ದೇಶನ ಮಾಡಿದ ಶಂಕರ್‌ನಾಗ್‌.

ಡಾ.ರಾಜ್ ಕುಮಾರ್ ಅಭಿನಯಿಸಿರುವ "ಒಂದು ಮುತ್ತಿನ ಕಥೆ" ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು. ಈ ಮೂಲಕ ಅಣ್ಣಾವ್ರ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿದ್ದರು. ಶಂಕರ್‌ ಅತ್ಯಂತ ಕಿತಿಯ ವಯಸ್ಸಿನಲ್ಲೇ ಉನ್ನತ ಮಟ್ಟಕ್ಕೇರಿದ ಅಭೂತಪೂರ್ವ  ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.

ಇಂಜಿನಿಯರ್‌ ಆಗಿ ಶಂಕರ್‌ ಕಂಡಿದ್ದ ಕನಸು..

ಬೆಂಗಳೂರು ಮೆಟ್ರೋ ಕನಸನ್ನು ಶಂಕರ್‌ನಾಗ್‌ ಅಂದಿನ ಕಾಲದಲ್ಲಿಯೇ ಕಂಡಿದ್ದರು. ಅಷ್ಟೇ ಅಲ್ಲ, ಬೆಟ್ಟಕ್ಕೆ ರೋಪ್ ವೇ ಹಾಕುವುದು,  ರಂಗಮಂದಿರಗಳ ಅಭಿವೃದ್ಧಿ, ಸೇರಿದಂತೆ ಕರ್ನಾಟಕದ ಅಭಿವೃದ್ದಿಯ ಕನಸನ್ನು ಕಂಡಿದ್ದರು ಶಂಕರ್‌ ನಾಗ್‌. ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿದೆ.

ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ಆಸೆ ಶಂಕರ್‌ ನಾಗ್‌ ಅವರಿಗೆ ಇತ್ತು.

ಬಡವರಿಗೆ ಕಡಿಮೆ ದರದಲ್ಲಿ, ಅತ್ಯಂತ ಕಡಿಮೆ ದಿನಗಳಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ಅಭಿಲಾಷೆ ಶಂಕರ್‌ನಾಗ್‌ ಅವರಿಗೆ ಇತ್ತು. ಈ ಸಂಬಂಧ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯಚವರ ಸರ್ಕಾರದ ಮುಂದೆ ತಮ್ಮ ಎಲ್ಲಾ ಧ್ಯೇಯೋದ್ದೇಶಗಳು ಮತ್ತು ಕಾರ್ಯಯೋಜನೆಗಳನ್ನು ಇಟ್ಟಿದ್ದರು. ದುರಾದೃಷ್ಟ ಎಂದರೆ, ಶಂಕರ್‌ನಾಗ್‌ ಅವರ ಕನಸಿನ ಕಾರ್ಯಯೋಜನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಹಾಗೇನಾದರೂ ಸರ್ಕಾರ ಸ್ಪಂದಿಸಿದಿದ್ರೆ, ಇಷ್ಟೋತ್ತಿಗಾಗಲೇ ಬೆಂಗಳೂರು ತುಂಬಾ ಮೆಟ್ರೋ ರೈಲುಗಳ ಅಬ್ಬರ ಜೋರಾಗಿರುತ್ತಿತ್ತು.

ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಅಪಘಾತ.

ಸೆಪ್ಟೆಂಬರ್ 30, 1990 ರಲ್ಲಿ ’ಜೋಕುರಸ್ವಾಮಿ’ ಎಂಬ ಚಿತ್ರದ ಚಿತ್ರೀಕರಣಕ್ಕಾಗಿ ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು. ದಾವಣಗೆರೆ ಬಳಿಯ ಅನಗೋಡು ಎಂಬ ಹಳ್ಳಿಯ ಸಮೀಪಕ್ಕೆ ಬರುತ್ತಿರುವಂತೆ ಶಂಕರ್ ನಾಗ್ ಅವರ ಕಾರು ಅಪಘಾತಕ್ಕೀಡಾಯಿತು. ಇದರಿಂದ ತೀವ್ರ ಗಾಯಗೊಂಡಿದ್ದ ಅದಮ್ಯ ಚೇತನ ಶಂಕರ್‌ ನಾಗ್‌ ಕೊನೆಯುಸಿರೆಳೆದರು.

ಶಂಕರ್‌ ನಾಗ್‌ ವರ ಕೊನೆಯ ಸಿನೆಮಾ "ನಿಗೂಢ ರಹಸ್ಯ"
 
ಕನ್ನಡ ಜನತೆಗೆ ಶಂಕರ್‌ನಾಗ್‌ ಕೊನೆಯದಾಗಿ ಬಿಟ್ಟು ಹೋದ ಚಿತ್ರವೆಂದರೆ, ನಿಗೂಢ ರಹಸ್ಯ. ಇದು ಶಂಕರ್‌ ನಾಗ್ ಅಭಿನಯದ ಕೊನೆಯ ಚಿತ್ರ. ಈ ಸಿನೆಮಾದಲ್ಲಿ ನಿಗೂಢ ರಹಸ್ಯವನ್ನು ಭೇದಿಸುವ ಸಾಹಸಿಗನಾಗಿ ಕಾಣಿಸಿಕೊಂಡಿರುವ ಶಂಕರ್‌ನಾಗ್‌ ಸಾವು ಕನ್ನಡಿಗರಿಗೆ ಅರಗಿಸಿಕೊಳ್ಳಲಾದೇ ನಿಗೂಢ ರಹಸ್ಯವಾಗಿ ಉಳಿದುಬಿಟ್ಟಿತು.

ಸಂಬಂಧಿತ ವಿಷಯಗಳು

Explore in English

Browse these topics in English to find related stories.

ಈ ಸುದ್ದಿಯ ಬಗ್ಗೆ

Preparing an English story description…

ಕಾಮೆಂಟ್‌ಗಳು

RECENT POSTS

⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ

LIVE
#01RECENT POSTS

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02RECENT POSTS

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

#03RECENT POSTS

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#04RECENT POSTS

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

#05RECENT POSTS

ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್

#06RECENT POSTS

ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು

#07RECENT POSTS

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ

#08RECENT POSTS

ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

#09RECENT POSTS

ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ

#10RECENT POSTS

ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ

MYSTERY DECODED

🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ

LIVE

THE POLITICS

🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ

LIVE
ರಾಜಕೀಯಶೀಘ್ರದಲ್ಲೇ ಬರಲಿದೆ

THE STATES MAN

🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ

LIVE

NATION WATCH

🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ

LIVE

GLOBAL TODAY

🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ

LIVE
ಇಂದಿನ ವಿಶ್ವಶೀಘ್ರದಲ್ಲೇ ಬರಲಿದೆ

MOVIE WORLD

🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್

LIVE

BEHIND THE SPORTS

🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ

LIVE
ಕ್ರೀಡೆಯ ಹಿಂದೆಶೀಘ್ರದಲ್ಲೇ ಬರಲಿದೆ

BUSINESS SECRETS

💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು

LIVE

💡MOTIVATION MANTRA

💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ

LIVE

🔍THE EXPLAINERS

🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು

LIVE

🙏GOD IS GREAT

🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು

LIVE

😂THE FUN FACTORY

😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು

LIVE

❤️LOVE IS LIFE

❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ

LIVE

🎥TRENDING VLOGS

🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ

LIVE
4 columns below in ONE ROW - Logo | Title | Navigation | Languages
NEW - Replaces Old Left/Right/Top/Breaking/Hero - 5 columns below in ONE ROW - WIRED
Advertising - Partner images/videos for homepage hero - 5 columns ONE ROW
NEW - Replaces Old Article Body Ads Images/Videos - 3 columns ONE ROW - WIRED
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.

A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows. A FOX TV.com - Brings Breaking news, Headlines of the days, top stories from India, United states, Russia and other contries