ಕಲ್ಲಿನ ಕೋಳಿ ಕೂಗಿದ್ರೆ ಆಗುತ್ತೆ ಪ್ರಳಯ.. ಕಲ್ಲು ಬಸವ ಮಾತಾಡಿದ್ರೆ ಭೂಮಿಯೇ ಬಾಯಿ ತೆರೆಯುತ್ತೆ.. ಕೆಡುಗಾಲಕ್ಕೆ ನಾಯಿ ಕೂಡ ಮೊಟ್ಟೆ ಇಡುತ್ತೆ.. ಹೌದು.. ಇವೆಲ್ಲ ನಾಶದ ಸಂಕೇತ ನಮ್ಮ ಸಮಾಜ ಹೇಳುತ್ತಾ ಬಂದಿದೆ.. “ಅವ್ವಾನೂ ಹಡಿಬೇಕು, ಅಪ್ಪಾನೂ ದುಡಿಬೇಕು. ಅದಲು ಬದಲು ಆಗೋದ್ರೆ ಕಲ್ಲಿನ ಕೋಳಿ ಕೂಗತೈತೆ.. ಲೋಕಕೆ ಪ್ರಳಯ ಆಗುತೈತೆ” ಅಂತ ಒಂದು ಮಾತಿದೆ.. ಇದಕ್ಕೆ ಪುಷ್ಟಿ ನೀಡುವಂತೆ ಅಲ್ಲಲ್ಲಿ ವಿಚಿತ್ರ ಘಟನೆಗಳು ನಡೀತಾ ಇವೆ.
ಥಾಯ್ ಲ್ಯಾಂಡ್ ನಲ್ಲಿ ಮತ್ತೊಂದು ವಿಚಿತ್ರ ನಡೆದಿದ್ದು ನಿಮಗೆ ತಿಳಿದಿರಬೇಕು.. ಥಾಯ್ಲಾಂಡ್
ನಲ್ಲಿ ಎಮ್ಮೆಯೊಂದು ಮನುಷ್ಯನ ರೂಪವನ್ನೇ ಹೋಲುವಂಥ ವಿಚಿತ್ರ ಮಗುವಿಗೆ ಜನ್ಮ ನೀಡಿದೆ. ತಲೆ, ದೇಹ, ಮತ್ತು ಹೊಟ್ಟೆ, ಎಲ್ಲವೂ
ತದ್ರೂಪ್ ಮಾನವನಂತೆಯೇ.. ಆದ್ರೆ, ಹುಟ್ಟಿದ ತಕ್ಷಣವೇ ಆ ಕರು ಹಸುನೀಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇವೆಲ್ಲವೂ ಕೇಡುಗಾಲದ ಮುನ್ಸೂಚನೆಯನ್ನು ತೋರಿಸಲು ನಡೆಯುತ್ತಿದೆ ಎಂಬುದು ಧಾರ್ಮಿಕ ಗುರುಗಳ
ವಾದ..
ಅವನು ಇಂಡೋನೇಷ್ಯಾದ ಮೀನುಗಾರ.. ಹೆಸರು ಡೆಡೆ.. ಇವನ ಮೈ ಚರ್ಮ ಅಚ್ಚರಿಯ ಗೂಡಾಗಿದೆ.. ವಿಜ್ಞಾನಿಗಳ ಪಾಲಿಗೆ ಸಂಶೋಧನೆಯ ಭಾಗವಾಗಿದೆ.. ಯಾಕೆ ಅಂತೀರ..?? ಅವನ ಮೈನಲ್ಲಿ ಗಿಡ ಬೆಳೀತಿದೆ.. ಕೈ ಬೆರಳುಗಳು, ಕಾಲು ಬೆರಳುಗಳು ಮರದ ಬೇರುಗಳಂತೆ ಕವಲು ಒಡೀತಾ ಇವೆ. ಇದು ಸುಳ್ಳೋ ನಿಜವೋ ಅಂತ ತಿಳಿಯೋದಕ್ಕಾಗಿ, ವಿಶ್ವ ವಿಖ್ಯಾತ ಚರ್ಮ ತಜ್ಞ ಎಂದು ಹೆಸರು ಪಡೆದ “ಮೇರಿ ಲ್ಯಾಂಡ್ ವಿಶ್ವ ವಿದ್ಯಾನಿಲಯದ ಚರ್ಮ ತಜ್ಞ Dr Anthony Gaspari, ಇಂಡೋನೇಷ್ಯಾಗೆ ಬಂದ್ರು. ಆದ್ರೆ ಅವರು ಕಂಡಿದ್ದು ಅಚ್ಚರಿ.. ಹೌದು.. ಆ ವ್ಯಕ್ತಿಯ ಮೈ ಚರ್ಮ ಅಕ್ಷರಶಃ ಗಿಡದಂತಿದೆ.. ರೆಂಬೆ ಕೊಂಬೆಗಳು ಬೆಳೀತಾ ಇವೆ.. ವರ್ಷಕ್ಕೆ ಐದು
ಸೆ.ಮೀ ಗಳಷ್ಟು ಆ ಕೊಂಬೆಗಳು, ಮತ್ತು ಬೇರುಗಳು ಬೆಳೀತಾ ಇವೆಯಂತೆ.. ಇದು ಅಚ್ಚರಿಯೋ, ಪ್ರಳಯದ ಮುನ್ಸೂಚನೆಯೋ
ಗೊತ್ತಿಲ್ಲ..
ಸಂಪ್ರದಾಯವಾದಿಗಳು ಪ್ರಳಯಕ್ಕೆ ಒಂದೊಂದು ಕಾರಣ
ಕೊಡ್ತಾ ಇದ್ದಾರೆ. ಆದ್ರೆ ನಾಸಾ ವಿಜ್ಞಾನಿಗಳು ತಮ್ಮದೇ ಆದ ವೈಜ್ಞಾನಿಕ ಕಾರಣವನ್ನು ಕೊಡ್ತಿದ್ದಾರೆ.. ನಾಸಾ
ವಿಜ್ಞಾನಿಗಳ ಪ್ರಕಾರ ಪ್ರಳಯಕ್ಕೆ ಕಾರಣವಾಗೋದು ನಿಬಿರೋ ಅನ್ನೋ ಆಕಾಶ ಕಾಯ.. ಇದು ನಭೋಮಂಡಲದಲ್ಲಿನ
ಒಂದು ಗ್ರಹದ ತುಂಡಾಗಿದ್ದು ಗ್ರಹಗಳ ಚಲನೆಯ ಸಮಯದಲ್ಲಿ ಸ್ವಲ್ಪ ಭಾಗ ಕಳಚಿಕೊಂಡಿದೆ.. ಹೀಗೆ
ಕಳಚಿಕೊಂಡಿರೋ ಆ ತುಂಡು ನೇರವಾಗಿ ಭೂಮಿಒಯ ಕಡೆಗೆ ಬರ್ತಾ ಇದ್ಯಂತೆ.. ಆ ನಿಬಿರೋ ಏನಾದ್ರೂ ಬಂದು
ಅಪ್ಪಳಿಸಿದ್ರೆ ಭೂಮಿ ಛಿದ್ರ-ಛಿದ್ರವಾಗೋದು ಗ್ಯಾರಂಟಿ.. ಹೀಗಾಗಿ ನಿಬಿರೋ ಅಪ್ಪಳಿಸಿದ್ರೆ
ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ.. ಭೂಮಿ ಚಿದ್ರವಾಗುವುದರಿಂದ ಭೂಗರ್ಭದಲ್ಲಿ ಇರೋ
ಲಾವಾ ರಸ ಜ್ವಾಲಾಮುಖಿಯಾಗಿ ಹೊರ ಚಿಮ್ಮುತ್ತೆ.. ಹೀಗೆ ಹೊರ ಚಿಮ್ಮಿದ ಲಾವಾ ರಸವು 700 ನಿಂದ 1,200 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಇರುತ್ತೆ.. ನಾವು ಸ್ನಾನ ಮಾಡೋಕೆ ಉಪಯೋಗಿಸೋದೆ ಬರಿ 20-30 ಡಿಗ್ರಿಯಷ್ಟು ಬಿಸಿ ಇರೋ ನೀರನ್ನು.. ಹೀಗಿರುವಾಗ ಸಾವಿರಾರು ಡಿಗ್ರಿ ಬಿಸಿ ಮೈಮೇಲೆ
ಬಿದ್ರೆ ಏನಾಗುತ್ತೆ ಅಂಣತ ನೀವೇ ಊಹೆ ಮಾಡ್ಕೊಳ್ಳಿ.. ಏಕಾ ಏಕಿ ಭೂಮಿಯ ಮೇಲಿರುವ ಕೋಟ್ಯಾಂತರ ಜೀವ ಸಂಕುಲ ನಶಿಸಿ ಹೋಗುತ್ತವೆ.. ಜೀವಿಗಳು
ಬದುಕಿದ್ವು ಅನ್ನೋ ಸಣ್ಣ ಸಾಕ್ಷಿಗಳು ಸಿಗೋದಿಲ್ಲ.




















ಕಾಮೆಂಟ್ಗಳು